ಡೆಲ್‍ಬ್ರೂಕ್, ಮ್ಯಾಕ್ಸ್
1906 - ಜರ್ಮನಿ ಸಂಜಾತ ಅಮೆರಿಕನ್ ಜೀವವಿe್ಞÁನಿ. 1969ರಲ್ಲಿ ವೈದ್ಯವಿಭಾಗ ನೊಬೆಲ್ ಪಾರಿತೋಷಕದ ಸಹವಿಜೇತ (ಆಲ್‍ಫ್ರೆಡ್ ಡೇ ಹರ್ಷೀ ಮತ್ತು ಸಾಲ್ವಡಾರ್ ಲ್ಯೂರಿಯ ಉಳಿದ ಇಬ್ಬರು ವಿಜೇತರು). 1906ರಲ್ಲಿ ಸೆಪ್ಟೆಂಬರ್ 4 ರಂದು ಬರ್ಲಿನ್ನಿನಲ್ಲಿ ಜನನ. ಗಟಿಂಗೆನ್ ವಿಶ್ವವಿದ್ಯಾಲಯದಿಂದ ಭೌತ ವಿe್ಞÁನದಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದ (1930) ಬಳಿಕ ಅದೇ ವಿಷಯದಲ್ಲಿ ಉನ್ನತ ವ್ಯಾಸಂಗವನ್ನು ನಡೆಸಿದ. 1931-32ರಲ್ಲಿ ರಾಕ್‍ಫೆಲ್ಲರ್ ಫೌಂಡೇಷನ್ನಿನ ಫೆಲೋಷಿಪ್ಪನ್ನು ಪಡೆದು ಕೋಪೆನ್ ಹೇಗೆನ್ ಮತ್ತು ಜೂರಿಕ್‍ಗಳಲ್ಲೂ ಅನಂತರ 1932 ರಿಂದ 35ರ ವರೆಗೆ ನೀಲ್ಸ್ ಬೋರನ ಸಹಾಯಕನಾಗಿ ಬರ್ಲಿನ್ನಿನ ಕೈಸರ್ ವಿಲ್‍ಹಲ್ಮ್ ಇನ್‍ಸ್ಟಿಟ್ಯೂಟ್ ಫರ್‍ಕೆಮಿ ಎಂಬ ಪ್ರಯೋಗಾಲಯದಲ್ಲೂ ಅಧ್ಯಯನವನ್ನು ಮುಂದುವರಿಸಿದ. 1935ರಲ್ಲಿ ಜರ್ಮನಿಯನ್ನು ಬಿಟ್ಟು ಡೆಲ್‍ಬ್ರೂಕ್ 1937-39ರಲ್ಲಿ ಪುನಃ ರಾಕ್‍ಫೆಲ್ಲರ್ ಫೆಲೋಷಿಪ್ಪನ್ನು ಪಡೆದು ಕ್ಯಾಲಿಫೋರ್ನಿಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಕ್ಯಾಲ್‍ಟೆಕ್) ವ್ಯಾಸಂಗವನ್ನು ಪ್ರಾರಂಭಿಸಿದ. ಅಲ್ಲಿ ಎಮೊರಿ ಎಲ್ಲಿಸ್ ಎಂಬ ಸಂಶೋಧಕನ ಪ್ರಭಾವದಿಂದ ವೈರಸ್ಸುಗಳು ಹಾಗೂ ಬ್ಯಾಕ್ಟೀರಿಯೋಫೇಜುಗಳ ಅನುವಂಶಿಕ ಗುಣಗಳ ವರ್ಗಾವಣೆಯ ವಿಚಾರವಾಗಿ ಆಸಕ್ತಿವಹಿಸಿ ಸಂಶೋಧನೆಗಳನ್ನು ಕೈಗೊಂಡ. 

ಬ್ಯಾಕ್ಟೀರಿಯಗಳೊಳಗೆ ಪರಾವಲಂಬಿ ಜೀವಿಗಳಾದ ಬ್ಯಾಕ್ಟೀರಯೋಫೇಜುಗಳನ್ನು ಫೆಲಿಕ್ಸ್ ಡಿ ಹೆರ್ರೆಲ್ಲೇ ಎಂಬಾತ ಮೊದಲಿಗೆ ವಿವರಿಸಿದಾಗಿನಿಂದ (1917) ಅವು ವೈದ್ಯಕೀಯದಲ್ಲಿ ಪ್ರಮುಖ ವಿಷಯವಾಗಬಹುದೆಂಬ ಭಾವನೆಯಿಂದಲೇ ವ್ಯಾಸಂಗಿಸಲ್ಪಡುತ್ತಿದ್ದವು. ಇವು ಬ್ಯಾಕ್ಟೀರಿಯ ಕೋಶಗಳೊಳಗೆ ವೃದ್ಧಿಗೊಂಡು ಶೇಖರಣೆ ಆಗುವ ಬ್ಯಾಕ್ಟೀರಿಯ ವೈರಸ್ಸುಗಳು. ಶೇಖರಣೆ ಮಿತಿಮೀರಿದಾಗ ಬ್ಯಾಕ್ಟೀರಿಯ ಕೋಶ ನಾಶಗೊಂಡು ವೈರಸ್ಸುಗಳ ಬಿಡುಗಡೆ ಆಗುತ್ತೆಂದೂ ಪುನಃ ಇನ್ನೊಂದು ಬ್ಯಾಕ್ಟೀರಿಯ ಕೋಶದೊಳಕ್ಕೆ ಸೇರುವವರೆಗೂ ಅವು ಜಡವಾಗಿ ನಿರ್ಜೀವವಸ್ತುವಿನಂತೆ ಇರುತ್ತವೆಂದೂ ಡಿ ಹೆತ್ರೆಲ್ಲೇ ವಿವರಿಸಿದ್ದ. ಈ ಅಂಶವನ್ನು ಮುಂದುವರಿಸಿ ಆಸ್ಟ್ರೇಲಿಯದ ಎಫ್.ಎಮ್. ಬರ್ನೆಟ್ ಎಂಬಾತ ಫೇಜುಗಳಲ್ಲಿ ವೈವಿಧ್ಯ ಇರುವುದನ್ನೂ ಎರಡು ವಿಧವಾದ ಫೇಜುಗಳನ್ನು ಪ್ರಾಯೋಗಿಕವಾಗಿ ಬ್ಯಾಕ್ಟೀರಿಯ ಕೋಶದೊಳಗೆ ಸೇರಿಸಿದಾಗ ಮಿಶ್ರತಳಿ ಫೇಜುಗಳು ಉದ್ಭವಿಸುವುದನ್ನೂ 1930ರ ಹೊತ್ತಿಗೆ ವಿಶದಪಡಿಸಿದ್ದ. ಪ್ರಬಲ ಸೂಕ್ಷ್ಮದರ್ಶಕಗಳಲ್ಲೂ ವೀಕ್ಷಿಸಲು ಕಷ್ಟಸಾಧ್ಯವಾದ ಇವುಗಳ ಆಕಾರ ಗಾತ್ರಗಳನ್ನು ಮಾರ್ಟಿನ್ ಶ್ಲೆಸಿಂಗರ್ ಎಂಬ ಜರ್ಮನ್ ವಿe್ಞÁನಿ ಬಳಸು ಮಾರ್ಗಗಳಿಂದ ಪರಿಶೋಧಿಸಿದ (1933-34). ವಾಸ್ತವವಾಗಿ ಇವುಗಳ ನೇರದರ್ಶನ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ಸಾಧ್ಯವಾಗಿ ಇವುಗಳ ವಿವರಣೆ ಬಂದದ್ದು 7-8 ವರ್ಷಗಳ ಬಳಿಕವೇ (1941). ಬ್ಯಾಕ್ಟೀರಿಯೋಫೇಜುಗಳ ರಾಸಾಯನಿಕ ರಚನೆ ವಂಶವಾಹಿಗಳಾದ ಕ್ರೋಮೊಸೋಮುಗಳಂತೆಯೇ ಎಂದು ಶ್ಲೆಸಿಂಗರ್ ವಿಶದಪಡಿಸಿದ್ದ. ಈ ವಿಷಯಗಳನ್ನೆಲ್ಲ ಡೆಲ್‍ಬ್ರೂಕ್ ಕ್ಯಾಲ್‍ಟೆಕ್ಕಿನಲ್ಲಿ ಸಂಶೋಧನೆಗಳನ್ನು ಕೈಗೊಳ್ಳುವುದಕ್ಕೆ ಪೂರ್ವಭಾವಿಯಾಗಿಯೇ ಗ್ರಹಿಸಿದ್ದ. 

	ತಳಿಗಳಲ್ಲಿ ಆನುವಂಶಿಕ ಗುಣಗಳು ವ್ಯಕ್ತವಾಗುವುದಕ್ಕೆ ಮರಿಕೋಶಗಳಿಗೆ ಜನ್ಮದಾತ ಕೋಶಗಳ ಮುಖ್ಯಘಟಕಗಳಾದ ರಾಸಾಯನಿಕ ಬೃಹದಣುಗಳ (ಮಾಲಿಕ್ಯೂಲ್ಸ್) ಸಾಗಣೆ ಕಾರಣವಾಗಿರಬಹುದಾದ ಸಾಧ್ಯತೆಯನ್ನು ಡೆಲ್‍ಬ್ರೂಕ್ ಜರ್ಮನಿಯಲ್ಲಿದ್ದಾಗಲೇ ತನ್ನ ಸಹೋದ್ಯೋಗಿಗಳೊಡನೆ ಚರ್ಚಿಸಿದ್ದುಂಟು. ಆದರೆ ಅದೇ ಜರ್ಮನಿಯ ದಿವಸಗಳಂದು ಭೌತವಿe್ಞÁನದ ಪ್ರಮುಖವಿಷಯವಾಗಿದ್ದ ಕ್ವಾಂಟಮ್ ಸಿದ್ಧಾಂತದಲ್ಲಿ ತಲ್ಲೀನನಾಗಿದ್ದ ಈತನಿಗೆ ಕ್ಯಾಲ್‍ಟೆಕ್ಕಿಗೆ ಬಂದ ಮೇಲೆ, ತಳಿಶಾಸ್ತ್ರದಲ್ಲಿ ವ್ಯಾಸಂಗಿಸಬಹುದಾದ ಒಂದು ಘಟಕ ಎಂಬುದು ಏನಾದರೂ ಇದ್ದರೆ ಬ್ಯಾಕ್ಟೀರಿಯೋಫೇಜೇ ಸರಿ ಎಂದು ಮನದಟ್ಟಾದುದು ಆಶ್ಚರ್ಯವಿಲ್ಲ. ಆದ್ದರಿಂದ ತನ್ನ ವ್ಯಾಸಂಗವಸ್ತುವಾಗಿ ಅವನು ಫೇಜಿನ ಮೇಲೆ ಸಂಶೋಧನೆಯನ್ನು ಆಯ್ದುಕೊಂಡಿದ್ದಲ್ಲದೆ ಕ್ಯಾಲ್‍ಟೆಕ್ಕನ್ನು ಬಿಟ್ಟು ವ್ಯಾನ್‍ಡರ್ ಬೆಲ್ಡ್ ವಿಶ್ವವಿದ್ಯಾಲಯದಲ್ಲಿ ಭೌತವಿe್ಞÁನದ ಅಧ್ಯಾಪಕನಾಗಿ ಸೇರಿದ ಮೇಲೂ ಈ ವ್ಯಾಸಂಗವನ್ನು ಅಲ್ಲಿಯೂ ಮುಂದುವರಿಸಿದ. 1940ರಲ್ಲಿ ಫಿಲಡೆಲ್ಫಿಯದಲ್ಲಿ ಇವನಿಗೆ ಯೂರೋಪಿನಿಂದ ಮತ್ತೊಬ್ಬ ವಲಸೆಗಾರ ವಿe್ಞÁನಿಯಾಗಿ ಬಂದಿದ್ದ ಲ್ಯೂರಿಯನ ಪರಿಚಯವಾಯಿತು. ಇವರಿಬ್ಬರ ಆಸಕ್ತಿಯ ಫಲವಾಗಿ ಫೇಜುಗಳ ತಳಿಶಾಸ್ತ್ರ ವ್ಯಾಸಂಗ ಪ್ರಾರಂಭವಾಯಿತು. ಫೇಜುಗಳಿಗೆ ತುತ್ತಾಗುವ ಬ್ಯಾಕ್ಟೀರಿಯಗಳು ಕೆಲವು ಸಂದರ್ಭಗಳಲ್ಲಿ ಅವುಗಳಿಗೆ ಮಣಿಯದ ಪ್ರಭೇದಗಳಾಗಿ ಮಾರ್ಪಡುವುದು ಇವರ ಲಕ್ಷ್ಯಕ್ಕೆ ಬಂತು. ಈ ವಿಷಯವನ್ನು ಇವರು ಪ್ರಕಟಿಸುತ್ತ (1943) ತಂತಾನೇ ಉಂಟಾಗುತ್ತಿರುವ (ಸ್ಪಾನ್‍ಟೇನಿಯಸ್) ನೈಸರ್ಗಿಕ ಬದಲಾವಣೆಗಳ ಫಲವಾಗಿ ಆಪತ್ತನ್ನು ಎದುರಿಸಿ ಉಳಿಯಬಲ್ಲ ತಳಿ ಉದಯಿಸುತ್ತದೆ ಎಂದು ತಿಳಿಸಿದರು. ಈ ಪ್ರಕಟನೆ ಕೋಲ್ಡ್‍ಸ್ಟ್ರಿಂಗ್‍ಹಾರ್‍ಬರಿನ ಸಂಶೂೀಧಕನಾದ ಹರ್ಷಿಯ ಗಮನವನ್ನು ಸೆಳೆಯಿತು. ಡೆಲ್‍ಬ್ರೂಕ್, ಲ್ಯೂರಿಯ, ಇಬ್ಬರೂ ಹರ್ಷಿಯೊಡನೆ ಸೇರಿ ಮೂವರೂ ಕೋಲ್ಡ್‍ಸ್ಟ್ರಿಂಗ್ ಹಾರ್‍ಬರಿನಲ್ಲಿ ಈ ವಿಷಯದಲ್ಲಿ ಆಳವಾದ ವ್ಯಾಸಂಗಕ್ಕೂ ಪದೇ ಪದೇ ಜರಗುವ ಜಿe್ಞÁಸೆ ಗೋಷ್ಠಿಗಳಿಗೂ ಕಾರಣರಾದರು. ಇವುಗಳ ಫಲವಾಗಿ ಜೀವವಿe್ಞÁನ ಮೂಲಭೂತವಾಗಿ ಕೋಶಗಳಲ್ಲಿನ ಬೃಹದಣುಗಳ ವ್ಯಾಸಂಗಕ್ಕೆ ಸಂಬಂಧಿಸಿದೆ ಎನ್ನುವ ಭಾವನೆ ಮೂಡಿತು. ವ್ಯಾಂಡರ್‍ಬೆಲ್ಟ್ ವಿಶ್ವವಿದ್ಯಾಲಯದಲ್ಲಿ ಫೇಜುಗಳ ಸಂಖ್ಯಾಭಿವೃದ್ಧಿ ಅನುವಂಶೀಯತೆಗಳನ್ನು ಡೆಲ್‍ಬ್ರೂಕ್ ವ್ಯಾಸಂಗಿಸುತ್ತಿದ್ದಾಗ ಅವನ ಸಹಾಯಕನಾಗಿದ್ದವ (ಕಿರಿಯ) ಡಬ್ಲ್ಯೂ.ಟಿ. ಬೇಯ್ಲಿ ಎಂಬಾತ. ಬರ್ನೆಟ್ಟನು ಹಿಂದೆಯೇ ತೋರಿಸಿದ್ದಂತೆ ಒಂದೇ ಬ್ಯಾಕ್ಟೀರಿಯ ಕೋಶದೊಳಗೆ ಎರಡು ಫೇಜುಗಳನ್ನು ಹುದುಗಿಸಿ ಅವು ವೃದ್ಧಿಯಾಗುವುದಕ್ಕೆ ಅನುಕೂಲತೆಯನ್ನು ಕಲ್ಪಿಸಿದರೆ ಅವೆರಡು ಫೇಜುಗಳೇ ಅಲ್ಲದೆ ಮಿಶ್ರತಳಿಗಳು ಕೂಡ ಉದ್ಭವಿಸುವುದನ್ನು ಡೆಲ್ ಬ್ರೂಕ್ ಮತ್ತು ಬೇಯ್ಲಿ 1946ರಲ್ಲಿ ತೋರಿಸಿದರು. ಅಂದರೆ ಬ್ಯಾಕ್ಟೀರಿಯ ಕೋಶದೊಳಗೆ ಎರಡು ಫೇಜುಗಳ ಅನುವಂಶಿಕ ಗುಣವಾಹಕಗಳೂ ಪರಸ್ಪರ ವರ್ಗಾವಣೆಯಿಂದ ಮಿಶ್ರವಾಗಿರಬೇಕು ಎಂದಂತಾಯಿತು. ಇಂಥ ಮಿಶ್ರಣದಿಂದ ವ್ಯಕ್ತವಾಗುವ ಅನುವಂಶಿಕತೆ ಸಾಮಾನ್ಯವಾಗಿ ಸಸ್ಯ ಪ್ರಾಣಿಗಳಲ್ಲಿ ಕಂಡುಬರುವಂಥದ್ದೇ; ತತ್ಫಲವಾದ ಮಿಶ್ರತಳಿ ನೈಸರ್ಗಿಕ ಅಪಾಯಗಳಿಗೆ ಮಣಿದು ನಿರ್ಮೂಲವಾಗದಂಥ ಗುಣವನ್ನು ರೂಢಿಸಿಕೊಂಡಿರುತ್ತದೆ ಎಂದು ಇವರು ಸ್ಪಷ್ಟಪಡಿಸಿದರು. 

	1947ರಲ್ಲಿ ಡೆಲ್‍ಬ್ರೂಕ್ ವ್ಯಾನ್‍ಡರ್‍ಬೆಲ್ಟ್ ವಿಶ್ವವಿದ್ಯಾಲಯವನ್ನು ಬಿಟ್ಟು ಪುನಃ ಕ್ಯಾಲ್‍ಟೆಕ್ಕನ್ನು ಸೇರೆ ಅಲ್ಲಿ ಜೀವವಿe್ಞÁನದ ಪ್ರಾಧ್ಯಾಪಕನಾಗಿ ನೇಮಕಗೊಂಡ. ಸಂಯುಕ್ತ ಸಂಸ್ಥಾನದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‍ಸ್‍ಗೆ 1949ರಲ್ಲಿ ಆಯ್ಕೆ ಆದ. 1953ರ ಹೊತ್ತಿಗೆ ಎನ್.ಎಸ್. ಕೊಂಟಿ ಎಂಬಾತನೊಡನೆ ನಡೆಸಿದ ವ್ಯಾಸಂಗಗಳಿಂದ ಫೇಜುಗಳಲ್ಲಿ ಮಿಶ್ರತಳಿ ಉಂಟಾಗುವುದಕ್ಕೆ ಅವುಗಳಲ್ಲಿರುವ ಗುಣವಾಹಕಗಳ ಕ್ಲುಪ್ತರೀತಿಯ ವರ್ಗಾವಣೆ ಅಲ್ಲ. ಆದರೆ ಪದೇ ಪದೇ ಸಂಭವಿಸುವ ಎರಡೂ ಫೇಜುಗಳ ಅನಿರ್ದಿಷ್ಟ ಮಿಲನ ಕಾರಣ ಎಂಬ ತೀರ್ಮಾನಕ್ಕೆ ಬಂದ. ಅಲ್ಲದೆ ಆ ರೀತಿಯ ಮಿಲನ ಆಗುವ ಸಂದರ್ಭ ರೀತಿಗಳನ್ನು ಗಣಿತರೀತ್ಯ ಪ್ರತಿವಾದಿಸಿ ಪ್ರತಿರೂಪವನ್ನು (ಮಾಡಲ್) ತಯಾರಿಸಿದ. ಡೆಲ್‍ಬ್ರೂಕನಿಗೆ ಅಮೆರಿಕನ್ ಅಕಾಡಮಿ ಆಫ್ ಸೈನ್ಸಸ್ಸಿನ ಕಿಂಬರ್ ಜೆನಿಟಿಕ್ಸ್ ಪಾರಿತೋಷಿಕ ಲಭಿಸಿತು (1965). ಅಕ್ಟೋಬರ್ 1969ರಲ್ಲಿ, ನೊಬೆಲ್ ಪಾರಿತೋಷಿಕದ ಪ್ರಕಟನೆಗೆ ಸುಮಾರು 15 ದಿವಸಗಳಿಗೆ ಮುಂಚೆ ಲ್ಯೂರಿಯ ಮತ್ತು ಡೆಲ್‍ಬ್ರೂಕನಿಗೆ ಲೂಯಿಸ್ ಗ್ರಾಸ್ ಹಾರೋವಿಟ್ಸ್ ಬಹುಮಾನದ ಮೊತ್ತ 25,000 ಡಾಲರುಗಳು ದೊರಕಿದ್ದವು. ಡೆಲ್‍ಬ್ರೂಕ್ ತನ್ನ ಭಾಗವನ್ನು ರಾಜಕೀಯ ಮತ್ತು ಮತೀಯ ಕೈದಿಗಳ ಯೋಗಕ್ಷೇಮಕ್ಕಾಗಿ ದಾನಮಾಡಿದ.

	ಪದವಿಪೂರ್ವ ವಿದ್ಯಾರ್ಥಿಗಳಿಗೆ ಪಾಠಹೇಳುವುದು ಡೆಲ್‍ಬ್ರೂಕನಿಗೆ ಬಲು ಇಷ್ಟ. ವಿದ್ಯಾರ್ಥಿಗಳು ತನ್ನಿಂದ ತಕ್ಕಷ್ಟು ಉಪಯೋಗ ಪಡೆಯುತ್ತಿಲ್ಲ ಎಂದು ಇವನ ಕೊರಗು. ಫೇಜುಗಳ ಅನುವಂಶಿಕತೆಯ ವಿಚಾರದಲ್ಲೇ ಅಲ್ಲದೆ ಇನ್ನೂ ಅನೇಕ ಪರಿಶೀಲನೆಗಳಲ್ಲಿ ಈತ ನಿರತನಾಗಿದ್ದ (ಉದಾಹರಣೆಗೆ ದ್ಯುತಿಸಂಶ್ಲೇಷಣೆ). ಯಾವ ಸಂಶೋಧನೆಯಲ್ಲಿ ಉದ್ಯುಕ್ತನಾದರೂ ಪೂರ್ವಭಾವಿಯಾಗಿ ಆ ವಿಷಯದಲ್ಲಿ ಹುಡುಗರಿಗೆ ಪಾಠ ಹೇಳಿ ಬುಡಭದ್ರಮಾಡಿಕೊಳ್ಳುವುದು ಇವನ ವಾಡಿಕೆ. ಸಂಶೋಧನೆಯ ಫಲಿತಾಂಶಗಳನ್ನು ಪ್ರಕಟಿಸುವುದಕ್ಕೆ ಆತುರಮಾಡಬಾರದು. ಅತಿ ಮುಖ್ಯವಾದದ್ದನ್ನಲ್ಲದೆ ಮಿಕ್ಕವನ್ನು ಪ್ರಕಟಿಸಬಾರದು ಎಂಬ ಧ್ಯೇಯದವನು. ಡೆಲ್‍ಬ್ರೂಕನ ವ್ಯಾಸಂಗ ಫಲಿತಾಂಶಗಳ ಪ್ರಕಟನೆಗಳ ಗಾತ್ರ ಬಹು ಕಡಿಮೆ. ಆದರೆ ಅವನಿಗೆ ನೊಬೆಲ್ ಪಾರಿತೋಷಿಕ ದೊರಕಿದ್ದು ಪ್ರಕಟನೆಗಳ ಗಾತ್ರಕ್ಕಲ್ಲ; ಅವನ ವಿe್ಞÁನ ವ್ಯಕ್ತಿತ್ವದ ಔನ್ಯತ್ಯಕ್ಕೆ. ಅವನು ಸಹೋದ್ಯೋಗಿಗಳೊಡನೆ ಹಾಗೂ ಚರ್ಚಾಕೂಟಗಳಲ್ಲಿ ವ್ಯಕ್ತಪಡಿಸುತ್ತಿದ್ದ ಚಿಂತನೆಗಳಿಗೆ (ಈ ಮಾತುಗಳು ನೊಬೆಲ್ ಪಾರಿತೋಷಿಕದ ಅವನ ಸಹಭಾಗಿಗಳಾದ ಲ್ಯೂರಿಯ ಮತ್ತು ಹರ್ಷಿ ಇವರುಗಳಿಗೂ ಅನ್ವಯಿಸತಕ್ಕದ್ದು). ಬೇರೆಬೇರೆಯಾಗಿ ಕೆಲಸಮಾಡುತ್ತಿದ್ದರೂ ಪರಸ್ಪರ ವಿಚಾರವಿನಿಮಯ ಮಾಡಿಕೊಳ್ಳುತ್ತ, ಫೇಜುಗಳ ವ್ಯಾಸಂಗವನ್ನು ಕೈಗೊಂಡ ಪ್ರಮೇಯದಲ್ಲಿ ಈ ಮೂವರೂ ಒಟ್ಟಾಗಿ ಬೃಹದಣು ಸಂಬಂಧಿಕ ಜೀವವಿe್ಞÁನ (ಮಾಲಿಕ್ಯುಲರ್ ಬಯಾಲಜಿ) ಎಂಬ ಹೊಸ ವಿe್ಞÁನಶಾಖೆಯನ್ನು ಪ್ರಾರಂಭಿಸಿ ಬೆಳೆಸಿದಂತಾಯಿತು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ